ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು (FAQs)
(ಉತ್ತರಕ್ಕಾಗಿ ಕ್ಲಿಕ್ ಮಾಡಿ)
ನಾವು ನಡೆಯಲು ಕಲಿತಲ್ಲಿಂದ ತೊಡಗಿ ಆರೋಗ್ಯ, ಸಂಬಂಧಗಳು, ಶಿಕ್ಷಣ, ವೃತ್ತಿ, ಹೀಗೆ ಜೀವನದುದ್ದಕ್ಕೂ ಗೆಲುವು-ಸೋಲು, ಸುಖ-ದುಃಖ ಎಂಬ ಸ್ನೇಹಿತರು ಇದ್ದೇ ಇರುತ್ತಾರೆ. ನಾವು ಇಲ್ಲಿ “ಏಳು-ಬೀಳು” ಎನ್ನುತ್ತಿರುವುದೂ ಅವುಗಳನ್ನೇ. ಬೇಕಿದ್ದರೆ, ನಿದ್ರಿಸೋದು-ಎಚ್ಚರಗೊಳ್ಳೋದು ಹಾಗೂ ಹುಟ್ಟು-ಸಾವುಗಳನ್ನೂ ಸೇರಿಸಬಹುದು.
ಸಮಬಂಧಗಳಿಲ್ಲದೆ ಸಮಗ್ರ ಜೀವನವಿಲ್ಲ. ಕೆಲವೊಮ್ಮೆ ಏಳು-ಬೀಳುಗಳಿಂದ ಸಂಬಂಧಗಳು ಗಟ್ಟಿಯಾದರೆ, ಇನ್ನು ಕೆಲವೊಮ್ಮೆ ‘ಗಟ್ಟಿತನದಿಂದಲೇ’ ಏಳು-ಬೀಳುಗಳು ಹೆಚ್ಚಾಗುತ್ತವೆ. ಹಾಗಾಗಿ ಸಂಬಂಧಗಳ ನಿರ್ವಹಣೆಯ ಕುರಿತು SharingShree ಕನ್ನಡ ಮಾತನಾಡುತ್ತದೆ.
ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ವೇಗವಾಗಿ ಬದಲಾಗುತ್ತಿರುವ ಈ ಪ್ರಪಂಚದಲ್ಲಿ- ಸಹಾಯಕ ಅನುಭವಗಳು, ಜ್ಞಾನ, ಹಾಗೂ ಕೌಶಲ್ಯಗಳ ಕುರಿತ ಕಲಿಕೆ ಮತ್ತು ಹಂಚಿಕೆ, ವಿಚಾರಗಳ ಪರಸ್ಪರ ವಿನಿಮಯ ಖಂಡಿತವಾಗಿಯೂ ಅಗತ್ಯವಿದೆ. ನಿರಂತರ ಕಲಿಕೆ ಹೊರೆಯೇ, ಅಲ್ಲವೇ ಎಂಬುದು ಕಲಿಕೆಯ ವಿಷಯ, ವಿಧಾನ, ಆಸಕ್ತಿ ಹೀಗೆ ಹಲವು ಅಂಶಗಳನ್ನು ಒಳಗೊಂಡಿದೆ. ಹೆಚ್ಚು ತಳಿಯಿರಿ>>
ಹೌದು! ಬಳಕೆದಾರರ ವೈಯಕ್ತಿಕ ಬಳಕೆಗಳಿಗಾಗಿ SharingShree ಕನ್ನಡದ ವಿಷಯಗಳು ಉಚಿತವಾಗಿದೆ. ಇದು ಸ್ವಯಂ-ಕಲಿಕೆ, ಸ್ನೇಹಿತರ ಮತ್ತು ಪ್ರೀತಿಪಾತ್ರರ ಜೊತೆಗೆ ಹಂಚಿಕೊಳ್ಳುವುದನ್ನೂ ಒಳಗೊಳ್ಳುತ್ತದೆ. ಆದರೆ, ರಚನೆಕಾರರಾಗಿ (creators) ನಕಲಿಸುವುದು ಅಥವಾ ವಾಣಿಜ್ಯ ಬಳಕೆಯಂತಹ ಇತರ ಯಾವುದೇ ಉದ್ದೇಶಗಳಿಗೆ ಸಂಬಂಧಿಸಿದಂತೆ ಇದು ಹಕ್ಕುಸ್ವಾಮ್ಯಕ್ಕೆ (copyright) ಒಳಪಟ್ಟಿರುತ್ತದೆ.
ಹೌದು! SharingShree ಕನ್ನಡದ ಕಂಟೆಂಟ್ ಗಳು ಕನ್ನಡ ಭಾಷೆಯ (sharingshree.in) ಜೊತೆಗೆ SharingShree ಹೆಸರಿನಲ್ಲಿ ಇಂಗ್ಲಿಷ್ ಭಾಷೆಯಲ್ಲೂ (sharingshree.com) ಲಭ್ಯವಿದೆ.
ಹೌದು! ಮೂಲ ಉದ್ದೇಶ ಒಂದೇ ಆಗಿದ್ದರೂ, SharingShree ಮತ್ತು SharingShree ಕನ್ನಡ ಬಳಕೆದಾರರ ಭೌಗೋಳಿಕತೆ, ಸಂಸ್ಕೃತಿ, ಅಗತ್ಯತೆಗಳು ಮತ್ತು ವಿಷಯ ಬಳಕೆಯ ವಿಧಾನದ ನಡುವೆ ವ್ಯತ್ಯಾಸಗಳಿವೆ. ಇದಕ್ಕನುಸಾರವಾಗಿ ಕಂಟೆಂಟ್ ಗಳ ವಿಧಗಳು, ಪ್ರಸ್ತುತಪಡಿಸುವ ರೀತಿ, ಹೀಗೆ ಹಲವು ಬಗೆಯ ವೆತ್ಯಾಸಗಳಿರಬಹುದು.
ನಾವು ಕೆಲವು ಸಂದರ್ಭಗಳಲ್ಲಿ “ಸಲಹೆ” ಪದವನ್ನು ಬಳಸಬಹುದಾದರೂ, ಅದು SharingShree ಕನ್ನಡದ ಹಕ್ಕು ನಿರಾಕರಣೆ (Disclaimer) ಮತ್ತು ಅದರ ನಿಯಮಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ, ಹೆಚ್ಚಿನ ಮಾಹಿತಿಗಳಿಗಾಗಿ ದಯವಿಟ್ಟು ಅವುಗಳನ್ನು ಓದಿ.
SharingShree ಕನ್ನಡದ ಬಳಕೆದಾರರ ಗೌಪ್ಯತೆಯ ಸುರಕ್ಷತೆಯು ನಮ್ಮ ಪ್ರಾಥಮಿಕ ಕಾಳಜಿಗಳಲ್ಲಿ ಒಂದಾಗಿದೆ. ನಾವು ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ನಾವು ಯಾವ ಮಾಹಿತಿಯನ್ನು ಸಂಗ್ರಹಿಸುತ್ತೇವೆ ಮತ್ತು ಅವುಗಳನ್ನು ಹೇಗೆ ಬಳಸುತ್ತೇವೆ ಎಂಬುದರ ಜೊತೆಗೆ ಇನ್ನೂ ಹೆಚ್ಚಿನ ಮಾಹಿತಿಗಳನ್ನು SharingShree ಕನ್ನಡದ ಗೌಪ್ಯತಾ ನೀತಿ (Privacy Policy)ಯಲ್ಲಿ ವಿವರವಾಗಿ ತಿಳಿಸಲಾಗಿದೆ. ಸಂಪೂರ್ಣ ಮಾಹಿತಿಗಳಿಗಾಗಿ ದಯವಿಟ್ಟು ಅವುಗಳನ್ನು ಓದಿ.
ನೀವು Facebook Page ಮತ್ತು Instagram Page ಗಳಲ್ಲಿ SharingShree ಕನ್ನಡವನ್ನು ಫಾಲೋ ಮಾಡಬಹುದು. ಜೊತೆಗೆ ಸಂಸ್ಥಾಪಕರಾದ ಶ್ರೀನಿಧಿಯವರ ಬಗ್ಗೆ ತಿಳಿದುಕೊಳ್ಳಬಯಸಿದಲ್ಲಿ ಅವರ LinkedIn ಹಾಗೂ Twitter ಪ್ರೊಫೈಲ್ ಗಳಿಗೆ ಭೇಟಿ ನೀಡಬಹುದು.
ನೀವು ಕೇಳಲು ಅಥವಾ ಹೇಳಲು ಬಯಸುವ ವಿಷಯಗಳಿದ್ದರೆ, ಸಂಬಂಧಿತ ಮಾಹಿತಿಯೊಂದಿಗೆ [email protected] ಗೆ ಇಮೇಲ್ ಕಳುಹಿಸಿ. ಇಲ್ಲವಾದಲ್ಲಿ, ಸಂಪರ್ಕ ಪುಟದಲ್ಲಿ ನೀಡಲಾದ ಫಾರ್ಮ್ ಅನ್ನು ಬಳಸಬಹುದು.