ಏಳು-ಬೀಳಿನ
ಜೀವನ ಬಂಡಿಯ ಸುತ್ತ…!
ನಡೆಯಲು ಕಲಿತಲ್ಲಿಂದ ತೊಡಗಿ, ಮನೆ, ಶಾಲಾ-ಕಾಲೇಜು, ಉದ್ಯೋಗ, ವ್ಯಾಪಾರ-ವ್ಯವಹಾರ, ಸಂಬಂಧಗಳು- ಹೀಗೆ ಜೀವನ ಬಂಡಿಯ ಎಲ್ಲಾ ವಿಷಯಗಳಲ್ಲಿ ಏಳು-ಬೀಳು ಎನ್ನುವುದು ಸೂರ್ಯ ಚಂದ್ರರಂತೆ ವಾಸ್ತವ ಸಂಗತಿ. ಏನಂತೀರಿ?
ಜೀವನ ಬಂಡಿಗೆ ಅದೆಷ್ಟು ಕೊಂಡಿಗಳು!
ಆಹಾರ, ಬಟ್ಟೆ, ಮನೆಯಂತಹಾ ಮೂಲ ಅಗತ್ಯಗಳ ಜೊತೆಗೆ ಆರೋಗ್ಯ, ಸಾಕಷ್ಟು ಸಂಪತ್ತು, ಸಂಘರ್ಷರಹಿತ ಸಂಬಂಧಗಳು ಇದ್ದರೆಷ್ಟು ಚೆನ್ನ ಎಂಬ ಆಲೋಚನೆ ಮರೆಯಾಗುತ್ತಿದ್ದಂತೆ ಮುಂದಿದ್ದ ಕನ್ನಡಿ ನಕ್ಕಿತು. ನಿಮಗೂ ಇಂತಹಾ ಆಲೋಚನೆಗಳು ಬರುತ್ತವೆಯೇ? ಹೌದು ಎಂದಾದರೆ ನೀವು ಸರಿಯಾದ ವೆಬ್ಸೈಟ್ನಲ್ಲಿಯೇ ಇದ್ದೀರಿ ಕಣ್ರೀ.
ಇಲ್ಲಿ ಏನಿದೆ, ಹೇಗಿದೆ, ಯಾಕಿದೆ?
SharingShree ಕನ್ನಡದ ಅನುಕೂಲಗಳು
ಎಂಥಹಾ ಹೊಣೆ ಈ ಸಂಬಂಧಗಳ ನಿರ್ವಹಣೆ!
ವೈಯಕ್ತಿಕ, ವ್ಯಾವಹಾರಿಕ, ಸಾಮಾಜಿಕ, ಹಾಗೂ ಪರಿಸರದ ಜೊತೆ ನಮ್ಮ ಸಂಬಂಧ ಹೇಗಿದೆ ಎಂದು ಕೇಳಿದರೆ ಸುಲಭವಾಗಿ ಉತ್ತರಿಸಲು ಸಾಧ್ಯವೇ? ಈ ಕಡೆ ಕಿಡಿ ಎದ್ರೆ ಆ ಕಡೆ ಹೊಗೆ. ಒಟ್ಟಿನಲ್ಲಿ ಸಮಸ್ಯೆಗಳು ಬಗೆ ಬಗೆ. ಯಾಕೆ ಹೀಗೆ?
ಕಲಿಕೆ ಮತ್ತು ಹಂಚಿಕೆ!
ವೈಯಕ್ತಿಕ, ವೃತ್ತಿಪರ, ಹಾಗೂ ಜೀವನದ ಇತರ ಭಾಗದ ಅಭಿವೃದ್ಧಿಯು ನಿರಂತರ ಕಲಿಕೆಯನ್ನು ಬಯಸುತ್ತದೆ. ಅದಕ್ಕಾಗಿ ಪರಿಣತಿ ಒಳಗೊಂಡ ಅನುಭವ, ಜ್ಞಾನ, ಹಾಗೂ ಕೌಶಲ್ಯಗಳ ಪರಸ್ಪರ ವಿನಿಮಯ ಉಪಯುಕ್ತ
ನೀವು ಕೇಳಬಹುದಾದ ಪ್ರಶ್ನೆಗಳು (FAQs)
(ಉತ್ತರಕ್ಕಾಗಿ ಕ್ಲಿಕ್ ಮಾಡಿ)
ಏಕೆ SharingShree ಕನ್ನಡ?
ಏನೇ ಆದರೂ ನಿರಂತರ ಕಲಿಕೆಯ ಕರ್ಮ ತಪ್ಪಿದ್ದಲ್ಲ. ಹಾಗಂತ ಇದು ಶಾಲಾ-ಕಾಲೇಜುಗಳಿಗೆ ಸೀಮಿತವಲ್ಲ. ಒಟ್ಟಿನಲ್ಲಿ ವಿಷಯಗಳು ವಿನಿಮಯಗೊಳ್ಳದೆ ಅಭಿವೃದ್ಧಿಯಿಲ್ಲ. ಎಂದ ಮಾತ್ರಕ್ಕೆ ನೀವು ಮಂಕಾಗಬೇಕಿಲ್ಲ.