SharingShree
ಕನ್ನಡದ ಬಗ್ಗೆ

SharingShree ಕನ್ನಡ ಹೆಸರಿನ Sharing ಪದವು “ವಿಷಯಗಳ ಪರಸ್ಪರ ವಿನಿಮಯ” ಎಂಬ ಅರ್ಥದಲ್ಲಿ ಬಳಸಿದ್ದು, Shree ಯು ಸ್ಥಾಪಕರ ಹೆಸರಿನ ಭಾಗವಾಗಿದೆ.

ಚಿನ್ಹೆ-ಹಾಗೂ-ಅಕ್ಷರಗಳಲ್ಲಿ-SharingShree-ಕನ್ನಡ-ಲೋಗೋ-ಚಿತ್ರ.

ಏನಿದು? ಯಾಕಿದು?

ಪರಸ್ಪರ-ಅವಲಂಬಿತ-ಹಾಗೂ-ಆಧಾರಿತ ಸಮಗ್ರ-ಮಾನವ-ಜೀವನದ-ಅಂಶಗಳನ್ನು-ಒಳಗೊಂಡ-SharingShree-ಕನ್ನಡದ-ಗ್ರಾಫ್-ಒಳಗೊಂಡ-ಚಿತ್ರ.

ಸಮಗ್ರವಾದ ಜೀವನದಲ್ಲಿ ವಿಷಯಗಳು ಪರಸ್ಪರ ಅವಲಂಭಿಸಿದ್ದು,ಕಾರಣ-ಪರಿಣಾಮಗಳನ್ನು ಹಂಚಿಕೊಂಡಿವೆ. ಉದಾಹರಣೆಗೆ, ಆರೋಗ್ಯ ಹಾಳಾದರೆ ವೃತ್ತಿಗೆ ತೊಂದರೆಯ ಜೊತೆಗೆ ಸಂಬಂಧಗಳಲ್ಲೂ ಪರಿಣಾಮ ಕಂಡುಬರುತ್ತದೆ.

“ಈ ಜೀವನ ಬಂಡಿಯಲ್ಲಿ ಏಳು-ಬೀಳು ಸಾಮಾನ್ಯ, ಸಮತೋಲನ ಕಾಪಾಡಿಕೊಳ್ಳಬೇಕು” ಎಂದು ಹೇಳುವುದಕ್ಕೂ ಕೇಳುವುದಕ್ಕೂ ಚೆನ್ನಾಗಿದೆ. ಹಾಗಂತ ಆಗೊಮ್ಮೆ ಈಗೊಮ್ಮೆ ಸಿಗೋ ಮನರಂಜನೆಯಲ್ಲಿ ಇಂಥಹ ಮಾತು ನೆನಪಿರಲ್ಲ. ಸಮಸ್ಯೆಗಳ ಮದ್ಯದಲ್ಲಿ ಈ ರೀತಿ ಉಪದೇಶ ಕೇಳುವ ತಾಳ್ಮೆ ಹಾಗೂ ಮನಸ್ಥಿತಿಯಲ್ಲಿ ಇರೋದೇ ಕಷ್ಟ. ಮಾಡೋದೇನ್ರಿ?

ಏನೇ ಆದರೂ ನಿರಂತರ ಕಲಿಕೆಯ ಕರ್ಮ ತಪ್ಪಿದ್ದಲ್ಲ. ಹಾಗಂತ ಇದು ಶಾಲಾ-ಕಾಲೇಜುಗಳಿಗೆ ಸೀಮಿತವಲ್ಲ. ಒಟ್ಟಿನಲ್ಲಿ ವಿಷಯಗಳು ವಿನಿಮಯಗೊಳ್ಳದೆ ಅಭಿವೃದ್ಧಿಯಿಲ್ಲ.

ಹಾಗಾಗಿ SharingShree ಕನ್ನಡ ಸಂಬಂಧಗಳ ನಿರ್ವಹಣೆ, ಪರಸ್ಪರ ಕಲಿಕೆ ಹಾಗೂ ಹಂಚಿಕೆ, ಸಂಪತ್ತು, ಉತ್ಪನ್ನಗಳು, ಮತ್ತು ಸೇವೆಗಳ ಕುರಿತ ವಿಷಯಗಳ ವಿನಿಮಯದ ಮೂಲಕ ಜೀವನದ ಬೆಳವಣಿಗೆಯನ್ನು ಬಯಸುತ್ತದೆ.

ಕಾರ್ಟೂನ್-ಗೊಂಬೆಗಳನ್ನು-ಒಳಗೊಂಡ-ಕನ್ನಡ-ಭಾಷೆಯ-ಮಹತ್ವ-ಹೇಳುವ-SharingShree-ಕನ್ನಡದ-ಚಿತ್ರ.

ಕನ್ನಡ ಭಾಷೆಯ ಹಿರಿಮೆ!

ಕನ್ನಡ ಭಾಷೆಯನ್ನು ಇಷ್ಟಪಡಲು ಒಬ್ಬೊಬ್ಬರಿಗೆ ಒಂದೊಂದು ಕಾರಣವಿರಬಹುದು. ಕನ್ನಡದಲ್ಲಿ ನಮ್ಮ ಪ್ರೀತಿಗೆ ಕಾರಣ ಶಬ್ಧವನ್ನು ಜಾಣತನದಿಂದ ಅಕ್ಷರ ರೂಪದಲ್ಲಿ ಬಳಸುವುದರ ಜೊತೆಗೆ ಸಂವಹನದಲ್ಲಿ ಆಳವಾದ ಭಾವನೆಯನ್ನು ತುಂಬುವ ಅದರ ಸಾಮರ್ಥ್ಯ.

ಹಾಗಾಗಿ, ಸಾಧ್ಯವಾದಷ್ಟು ಕನ್ನಡದಲ್ಲಿ ಸಂವಹನ ನಡೆಸುವ ಮೂಲಕ ಭಾಷೆಯ ಹಿರಿಮೆಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಅನಿಸುತ್ತದೆ.

SharingShree ಕನ್ನಡದ ಸಂಸ್ಥಾಪಕರ ಬಗ್ಗೆ

SharingShree-ಕನ್ನಡದ-ಸಂಸ್ಥಾಪಕರಾದ-ಶ್ರೀನಿಧಿ-ಕೆ-ಯವರ-ಫೋಟೋ.

ನಮಸ್ತೆ ಗೆಳೆಯಾ/ ಗೆಳತಿ,

ನಾನು ಶ್ರೀನಿಧಿ ಕೆ, SharingShree ಕನ್ನಡದ ಸಂಸ್ಥಾಪಕ. ಇದರ ಬಗ್ಗೆ ಹೆಚ್ಚುವರಿ ತಿಳಿಯಲು ನೀವು ತೋರಿದ ಆಸಕ್ತಿಗೆ ಧನ್ಯವಾದಗಳು.

ಸಂಕ್ಷಿಪ್ತವಾಗಿ ನನ್ನ ಕಥೆ: ಪ್ರತಿಯೊಬ್ಬರೂ ತಮ್ಮದೇ ಆದ ಹಿನ್ನೆಲೆ ಮತ್ತು ವಿವಿಧ ಕಥೆಗಳನ್ನು ಹೊಂದಿದ್ದಾರೆ. ನೀವು ಮತ್ತು ನಾನು ಇದಕ್ಕೆ ಹೊರತಾಗಿಲ್ಲ. ಹಾಗಂತ ಚಿಂತಿಸಬೇಡಿ, ನನ್ನ ಕಥೆಯನ್ನು ಸಾಧ್ಯವಾದಷ್ಟು ಚಿಕ್ಕದಾಗಿಡಲು ಪ್ರಯತ್ನಿಸುತ್ತೇನೆ.

ನಾನು ಕೃಷಿ ಆಧಾರಿತ ಕುಟುಂಬಕ್ಕೆ ಸೇರಿದವನು, ಅಂದರೆ ನಾನು ಪರಿಸರದ ಪರಿಶುದ್ಧತೆಗೆ ಹತ್ತಿರವಿರುವೆ. ಇದು ನನ್ನ ಸ್ನಾತಕೋತ್ತರ ಪದವಿ(M. com) ನಂತರ ಉದ್ಯಮಶೀಲ ವೃತ್ತಿಯನ್ನು ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತು.

ವಾಣಿಜ್ಯ, ವ್ಯವಹಾರಗಳ ವಾಸ್ತವಗಳನ್ನು ಕಲಿಯುವ ಉದ್ದೇಶದಿಂದ ನಾನು ಮಾರಾಟ ಕಾರ್ಯ ನಿರ್ವಾಹಕನಾಗಿ (Sales Executive) ಕೆಲಸ ಮಾಡಿದ್ದೇನೆ. ಇದು ಚಿಕ್ಕ ಸ್ಥಳೀಯ ಅಂಗಡಿಗಳನ್ನು ಸೇರಿದಂತೆ ಮಾಲ್‌ಗಳು, ವೈದ್ಯಕೀಯ ಮಳಿಗೆಗಳು, ಸ್ಟಾರ್ ಹೋಟೆಲ್‌ಗಳು ಮತ್ತು ಇನ್ಫೋಸಿಸ್ ಕ್ಯಾಂಪಸ್‌ ನಂತಹಾ ವಿವಿಧ ಸ್ಥಳಗಳಿಗೆ ಭೇಟಿ ಮಾಡುವ ಮೂಲಕ ಉದ್ಯೋಗ, ಉದ್ಯಮಗಳ ಜೊತೆಗೆ ಸಂಬಂಧಗಳ ಪಾತ್ರ, ಜನರ ಸಂಪತ್ತಿನ ನಿರ್ವಹಣೆ, ಉತ್ಪನ್ನ ಹಾಗೂ ಸೇವೆಗಳ ಖರೀದಿಯ ರೀತಿಗಳಂತಹ ಹಲವಾರು ವಿಷಯಗಳ ಕಲಿಕೆಗೆ ಸಹಾಯಕವಾಯಿತು.

ವೈಯಕ್ತಿಕವಾಗಿ ಹಾಗೂ ವೃತ್ತಿಯ ಭಾಗವಾದ ಆನ್ಲೈನ್ ಮಾರ್ಕೆಟಿಂಗ್ (onlineshree.com) ನಿಂದಾಗಿ ಮಾನವರ ಸಮಸ್ಯೆ, ಆಸಕ್ತಿ, ನಡವಳಿಕೆ, ಭಾವನೆಗಳ ಏಳು-ಬೀಳನ್ನು ಒಳಗೊಂಡಂತೆ ಜೀವನವನ್ನು ಗಮನಿಸುವುದು ನನಗೆ ಅವಶ್ಯಕ ಮತ್ತು ಆಸಕ್ತಿದಾಯಕ ಹವ್ಯಾಸದಂತಾಯಿತು.

ಇಂತಹಾ ಕಾರಣಗಳಿಂದಾಗಿ ಆಫ್ಲೈನ್ ನಲ್ಲಿ ಇತರರೊಡನೆ ಪರಸ್ಪರ ಹಂಚಿಕೊಳ್ಳುವ ಅನುಭವಗಳು, ಜ್ಞಾನ, ಮತ್ತು ಮಾಹಿತಿಗಳನ್ನು ಆನ್ಲೈನ್ ನಲ್ಲಿ ಹಂಚಿಕೊಳ್ಳುವ ಆಲೋಚನೆಯಿಂದ SharingShree (sharingshree.com) ಎಂಬ ಬ್ಲಾಗ್(ಇಂಗ್ಲೀಷ್ ನಲ್ಲಿ ಲೇಖನಗಳು) ಹುಟ್ಟಿಕೊಂಡಿತು. ಅದರ ಕನ್ನಡ ರೂಪವೇ ಈ SharingShree ಕನ್ನಡ.

ಮುಂದೇನು?

ನಿಮ್ಮ ಆಸಕ್ತಿ ಹಾಗೂ ಅಗತ್ಯಗಳಿಗೆ ತಕ್ಕಂತೆ ವಿಷಯಗಳನ್ನು ಆಯ್ದುಕೊಳ್ಳಬಹುದು.

Scroll to Top