ಸಂಬಂಧಗಳ ನಿರ್ವಹಣೆ ಏಕೆ ಕಠಿಣ?

ಕಾಲ್ಪನಿಕ ಕರುಣಾಕರನ ಕರುಣಾಜನಕ ಕಥೆ!

ಆಸ್ತಿ ಹಂಚಿಕೆ ಮತ್ತು ಕುಟುಂಬದ ಸದಸ್ಯರ ಅಹಿತಕರ ನಡವಳಿಕೆಗೆ ಸಂಬಂಧಿಸಿದಂತೆ ಕರುಣಾಕರನ ಮನೆಯಲ್ಲಿ ಶೀತಲ ಸಮರ ನಡೆಯುತ್ತಿದೆ.

ಇದು ವೃತ್ತಿಪರ ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ವಿಳಂಬವನ್ನು ಉಂಟುಮಾಡಿ ಕರುಣಾಕರನ ಬಡ್ತಿಯ ಅಪರೂಪದ ಅವಕಾಶವನ್ನು ಕಸಿದುಕೊಂಡಿತು.

ಮತ್ತೊಂದೆಡೆ, ಕರುಣಾಕರನ ಸಹೋದರಿ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿದ್ದಳು. ಆದರೆ ಅವಳ ಕಡೆ ಯಾರ ಗಮನವೂ ಇಲ್ಲ.

ಕರುಣಾಕರನ ಪತ್ನಿ ಕೋಪ, ಬೇಸರದಿಂದ ತನ್ನ ಮಗುವಿನೊಂದಿಗೆ ತವರುಮನೆ ಸೇರಿದಳು.

ನಂತರ ಅವನು ಸಂಬಂಧಗಳ ನಿರ್ವಹಣೆಯ ಬಗ್ಗೆ ಆಳವಾಗಿ ಯೋಚಿಸಲು ಪ್ರಾರಂಭಿಸಿದ.

ಗಾಯದ ಮೇಲೆ ಬರೆಯ ಎಳೆದಂತೆ, ಜನರ ಅನೇಕ ವಿಧದ ಕಾಮೆಂಟ್‌ಗಳು, ತೀರ್ಪುಗಳು ಮತ್ತು ಅಭಿಪ್ರಾಯಗಳು ಹರಿದಾಡಲು ಪ್ರಾರಂಭಿಸಿದವು.

ಈ ದುಸ್ಥಿತಿಯಿಂದ ಪಾರಾಗಲು ದುಷ್ಟಟಗಳ ಆಲೋಚನೆಗಳು ಬಂದರೂ ಕರುಣಾಕರ ಅವುಗಳಿಗೆ ಬಲಿಯಾಗಲಿಲ್ಲ. ಬದಲಾಗಿ, ಸರಿಯಾದ ಕಲಿಕೆಯ ಬಲದಿಂದ ಸಂಬಂಧಗಳ ನಿರ್ವಹಣೆಯಲ್ಲಿ ಯಶಸ್ಸಿನೆಡೆಗೆ ಸಾಗಿದ.

ಕರುಣಾಕರನು ಕಾಲ್ಪನಿಕ ಪಾತ್ರವಾದರೂ ಸನ್ನಿವೇಶಗಳು ನಿಜವಲ್ಲವೇ?